ನಿನ್ನ ಕಣ್ಣಂಚಲಿ ಕಂಡ ಕಂಬನಿಯ ಮರೆಯೆ ನಾ ಇನ್ನೆಂದೂ
ನಿನ್ನ ದುಖಃವ ಸಹಿಸೆ ನಾ ಎಂದೂ..
ನನ್ನಿಂದ ನಿನಗೆ ಬಾರದೆಂದೂ ಕಷ್ಟ
ಇದು ಶತ ಸಿದ್ಧ.
ಬದುಕಲಿ ನೀ ಕಲಿಸಿದ ಹಲವಾರು ಪಾಠಗಳ ಮರೆಯುವುದುಂಟೇನು?
ಇಲ್ಲ ಇನಿಯೆ.
ಒಳಿತೊ ಕೆಡುಕೋ ನಾ ಬಾರೆನು ಇನ್ನೆಂದೂ ನಿನ್ನ ಬಾಳಲಿ.
ಕೊನೆಗೆ ಉಳಿದಿದಿರುವದೊಂದೇ ನನಗೆ
ನಿನ್ನ ನಗುವ ನೆನಪಿನಾಸರೆ.
ದಯಮಾಡಿ ಕೇಳದಿರು ಅದ ನನ್ನಿಂದ.
ನೀ ನಿನ್ನ ನೆಮ್ಮದಿಯ ತೋಳ ಆಸರೆಯ ಬಳಿ ಸದಾ ಹಸಿರಾಗಿರು.
ನಾ ಭಾವುಕನೋ ಅರೆ ಹುಚ್ಚನೋ ಮೂರ್ಖನೋ ತಿಳಿಯೆ.
ನೀ ಖುಷಿಯಿಂದಿರು.
................................................... ನಿಖಿಲ್ !!!
ನಲ್ಲೆಯ ಖುಷಿಯಲ್ಲೇ ಜಗದ ಸಮಸ್ತ ಸುಖ ಕಾಣುವ ನಲ್ಲಣ ಒಲುಮೆ ತುಂಬಾ ಚೆನ್ನಾಗಿ ಬಿಂಬಿತವಾಗಿದೆ ಇಲ್ಲಿ.
ReplyDeleteDhanyavaada sir
Delete