Thursday, July 29, 2010

ಪ್ರೀತಿ


ಗತಿಸಿದ ದಿನಗಳು
ನೋವಂತೆ ನೆನಪಾಗಿ
ಕದಡಿಹುದು ನೆಮ್ಮದಿಯ
ಕಾಡಿಹುದು ನನ್ನನ್ನು ಬಿಂಬಿಡದೆ....
ಪ್ರೀತಿಯೆ ಹೀಗೆನಾ ಗೆಳತಿ
ಪ್ರೀತಿ ಅಂದರೆ ನೋವೆನಾ

ಪಯಣವೆಲ್ಲಿಗೋ .... ನಾ ಅರಿಯೆ


ಪಯಣವೆಲ್ಲಿಗೋ ಪಯಣದ ಗುರಿಯ ನಾ ತಿಳಿಯೆ.
ಪಯಣವೆಲ್ಲಿಗೋ
ಪಯಣದ ಪರಿಯ ನಾ ಅರಿಯೆ

ದಟ್ಟ ದರಿದ್ರ ಬದುಕಿನ ಬವಣೆಗಳ ಗಂಟೋಳಗೆ

ನಗುವನ್ನೇ ಮರೆತಿತ್ತು ಮನ ಅಳುತಿತ್ತು
ಕನಸಿನ ಮೂಟೆ ಬೆಟ್ಟದಸ್ಟಿರಲು,
ಮನಸಿನ ಕೋಟೆಗೆ ಬೀಗ ಜಡಿದಿರಲು
ಆಸೆಗಳ ಆರ್ಭಟ ಹೆಚಿತ್ತು ಮನ ಕಲುಕಿತ್ತು .

ಕಳೆದಿಹೆ ದಿನಗಳನು ಎಲ್ಲ ಕಳೆದುಕೊಂಡವನ ಹಾಗೆ

ಸವೆದಿದೆ ಬಡ ಜೀವ ದುಖದೊಡಲೊಳಗೆ
ಮರೆತಿರಲು ಮನ ನಗುವನ್ನೇ
ಉತ್ತರ ಸಿಕ್ಕೀತೇ ಈ ಎಲ್ಲ ಬವಣೆಗಳಿಗೆ

ದಣಿವಾಗಿಹುದು ದೇಹಕೆ

ಮನಸಿಗಲ್ಲವಲ್ಲ ಚಿಂತೆ ಏತಕೆ
ಕಳೆದು ಕೊಳಲು ನೀ ಏನ ತಂದಿರುವೆ
ಎದುರಿಸು ಎಲ್ಲವ ಚಿಂತೆ ಬೇಕಿಲ್ಲ ಮನಕೆ

ಪಯಣವೆಲ್ಲಿಗೋ ಪಯಣದ ಗುರಿಯ ನಾ ತಿಳಿಯೆ.

ಪಯಣವೆಲ್ಲಿಗೋ
ಪಯಣದ ಪರಿಯ ನಾ ಅರಿಯೆ..........

Wednesday, July 14, 2010

ತೊಲಗು ಓ,,, ಒಲವೆಂಬ ಭ್ರಮೆಯೇ



ಸುತ್ತ ಎತ್ತ ನೋಡಿದರೂ ಕತ್ತಲು.

ಬಟ್ಟ ಬಯಲಿನಲಿ ನಿಂತು ಆಗಸದೆಡೆ ದಿಟ್ಟಿಸಿ ಅಟ್ಟಹಾಸದಿ ಅರಚಿ ಹೇಳುವೆ..........
ಯಾಕೆಬಂದೆ ನನ್ನಿಜೀವನದಲಿ. ತೊಲಗು ಓ,,, ಒಲವೆಂಬ ಭ್ರಮೆಯೇ.....


ದುಗುಡವಿಲ್ಲದ ಮನಕೆ ಬೇಕಿತ್ತೇ ಈ ಒಲವೆಂಬ ಒನಕೆಯ ಪೆಟ್ಟು,

ಏಕೆ ಹೋದೆ ನೀ ದೂರ ಒಲವೆಂಬ ನೋವ ಹಣತೆಯ ಹಚ್ಚಿಟ್ಟು.

ಕತ್ತಲಯುಗ ಮುಗಿದರೆ ಸಾಕು ಓ ಮನಸೇ,

ಭರವಸೆಕೊಡುವೆ ಮತ್ತೆಬರದು ಆ ಒಲವೆಂಬ ಬರಡು ಬದುಕು...