Saturday, October 15, 2011



ನಿನ್ನ ಅಗಲೋ ಆ ಘಳಿಗೆ ಸಮೀಪಿಸ್ತಾ ಇದೆ ಅಂತ ತಿಳಿದ ತಕ್ಷಣವೇ

ನನ್ನ ಎದೆಬಡಿತ ನಿಂತುಹೋಗಿದ್ರೆ ಎಷ್ಟೋ ಚೆನ್ನಾಗಿರ್ತಾ ಇತ್ತು ಕಣೇ ಚಿನ್ನಾ....


ನೀನಿಲ್ದೇ ಇರೋ ಹೃದಯದ ಬಡಿತ ಕೂಡ ನನ್ನ ನೋಯ್ಸ್ತಿದೆ ಇದೆ ಕಣೆ........

ಎಲ್ಲಾ ಖಾಲಿ ಖಾಲಿ .........


ಅಲೆಗಳಿಲ್ಡಿರೋ ಸಾಗರ ಬರಡು ಭೂಮಿತರಹ ಅಲ್ವಾ......


ನಾನೂ ಹಾಗೆ...... ಖಾಲಿ ಖಾಲಿ .........


ಒಂಟಿತನ


ನೋಯುತ್ತೆ ಅಂತ ಗೊತ್ತಿದ್ರು ಹೃದಯ ಯಾಕೆ ಮಿಡಿಯುತ್ತೆ ?

ಸಿಗಲ್ಲ ಅವಳು ಅಂತ ಗೊತ್ತಿದ್ರು ಪ್ರೀತಿ ಯಾಕೆ ಅರಳುತ್ತೆ?

ಯಾಕೆ ಮನ್ಸು ನೋಯುತ್ತೆ?................
ಯಾಕೆ ಒಂಟಿತನ ಕಾಡತ್ತೆ?........

ಪ್ರೀತಿ ಅಂದರೆ ಹೀಗೇನಾ ಗೆಳತಿ?
ಪ್ರೀತಿ ಅಂದರೆ ನೋವೆನಾ?

............................ನಿಖಿಲ್ ಮತ್ತದೇ ಮೌನ!!

Sunday, October 2, 2011

ದಾಹ........ಮೋಹ


ಅಂಗೈಗೆ ನೀನಿಟ್ಟ ಹಿತವಾದ ಮುತ್ತಿಗೆ

ಮನಸೋತ ಮನಸು ಮಧುರವಾಗಿ ಮೆತ್ತಗೆ

ತುಟಿಗೆ ತುಟಿಯೊತ್ತಿ ಲಜ್ಜೆ ಬದಿಗೊತ್ತಿ

ಮೌನವೇ ಮಾತಾಗಿ ದೇಹಗಳೊಂದಾಗಿ

ಹಸಿದ ಹೆಬ್ಬುಲಿಯಂತೆ ಬಳಸೆಳೆದು ಬಳುಕಾಡಿ

ಆರ್ಭಟಿಸಿ ಕಡಲಲೆಯಂತೆ

ತೊಯ್ದೆ ಮೆದುಮಳೆಂತೆ……….

ಬೆವರಿಳಿದು ಬಸವಳಿಯಿತು ಹಪಹಪಿಸಿದ ದೇಹ

ತೀರಿತು - ತೀರದ ದಾಹ........ಮೋಹ