ಹಾಯ್,
"ಉಸಿರಿರೋ ಪ್ರತಿ ಘಳಿಗೆನೂ ನಿನ್ ನೆನ್ಪಿಟ್ಕೊಂಡಿರ್ತೀನಿ ಕಣೊ ನಿನ್ ಮೇಲಾಣೆ"
ಅಂತ ಅಂದಿದ್ದು ನೆನ್‌ಪಿದ್ಯಾ?
....... ನಗು ಬರ್ತಿರ್ ಬೇಕಲ್ಲ?....
ಹೂ ಕಣೇ....
ನಾನೇ
ನೀನು ನನ್ ಜೊತೆ ಇರೋ ಪ್ರತೀ ಕ್ಷಣಾನೂ ಕಣ್ಣಲ್ಲಿ ಕಣ್ಣಿಟ್ಟು ನೋಡ್ಕೊಂಡ್ ಹುಡುಗ.
ನಿಜ ಅಲ್ವಾ? ನೆನ್ಪಾಗಿರ್ಬೆಕಲ್ಲ!!
ಹೆಯ್!!! ಸಾರೀ ಕಣೇ, ನಿಂಗೆ ಹರ್ಟ್ ಮಾಡ್ಬೇಕು ಅಂತ ಈ ಪತ್ರ ಬರೀತಿಲ್ಲ.......
ನಿನ್ನ ಅಗಲಿ ಕಳೆದಿರೋ ಘಳಿಗೇನ, ಆ ನೋವನ್ನ, ನಲಿವನ್ನ ನಿನ್ ಹತ್ರ ಅಲ್ದೇ ಇನ್ ಯಾರಹತ್ರಾನೇ ಹೆಳ್ಕೊಳ್ಲಿ?
ಪಾಪ ಕಣೇ ನಾನು.....
ಗೊತ್ತಾ ನಿಂಗೆ ... ಮಂಜು, ಮನು, ಸಮೀರ್, ವಿನಯ್.. ಅದೇ ಕಣೆ ನಿನ್ ಕ್ಲಾಸ್‌ಮೇಟ್ ಬೋಂಡ, ಸ್ವಾತಿ, ಕೀರ್ತಿ.... ಎಲ್ಲರದ್ದೂ ಮದ್ವೆ ಆಯ್ತು... ಎಲ್ಲರೂ ನನ್ನ ಇನ್ವೈಟ್ ಮಾಡಿದ್ರೂ. ಮಿಸ್ ಮಾಡದೇ ಎಲ್ಲರ ಮದ್ವೆಗೂ ಹೋಗ್ ಬಂದೆ ಕಣೇ....ನಾನ್ ಹೋಗಿದ್ದು ಬಿಟ್ಟಿ ಊಟ ಸಿಗತ್ತೆ ಅಂತ. ಆದ್ರೆ ನನ್ ಮನ್ಸಲ್ಲ..
ಪ್ರತಿ ಘಳಿಗೇನೂ , ಪ್ರತೀ ಮೂಲೆನೂ ನಿನ್ಗೋಸ್ಕರಾನೇ ಹುಡುಕಾಡ್ತಾ ಇದ್ದ ಕಣ್ಣ್ ಗಳನ್ನ ಸರಿದಾರಿಗೆ ತರೋಅಷ್ಟುಹೊತ್ಗೆ ನಾನು ಪಟ್ಟಿದ್ ಪಾಡು ಅಷ್ಟಿಷ್ಟಲ್ಲ.
ನಂಬು ನನ್ನ... ಕಂಗಳು ತೇವ ಆಗಿದ್ದು ಸುಳ್ಳಲ್ಲ. ಅಟ್ಲಿಸ್ಟ್ ನಿನ್ ಧ್ವನಿ ಕೇಳೋಕೆ ಕಾಯ್ತಾ ಕಾಟ ಕೊಡ್ತೀದ್ ಕಿವಿಗಳನ್ನ ಸಮಾಧಾನ ಮಾಡೋಕೂ ನನ್ ಕೈಲಾಗ್ಲಿಲ್ಲ...... ಸೋತೋದೆ.
ಒಮ್ಮೆ ನಿನ್ನನ್ನೂ ಕಣ್ಣ್ ತುಂಬಾ ಕಾಣುವಾಸೆ ಎಲ್ಲಿರುವೆ......
ಭುವಿಯಲ್ಲೋ, ಬಾನಲ್ಲೊ, ಇನ್ನೆಲ್ಲೋ.. ನಾ ಕಾಣೆ...
ಶೊನಾ.... ನೆನ್‌ಪಿದ್ಯಾ ಮೇ ೨೧-೨೦೦೬
ನಾನು ನಿನ್ನ ಸರ್ಯಾಗಿ ಪ್ರಪೋಸ್ ಮಾಡಿಲ್ಲ ಅಂತ ನೀ ಬೇಜಾರ್ ಮಾಡ್ಕೊಳ್ತ ಇದ್ಯಲ್ವಾ
ಅದ್ಯಾವತ್ತು valentine day ಆಗೋಗಿತ್ತೋ ಗೊತ್ತಿಲ್ಲ.
ಜನಜಂಗುಳಿಯ M.G.Road ನಲ್ಲಿ ಎಲ್ಲರ ಎದುರು ಮೊಣಕಾಲೂರಿ... ಬಚ್ಚಿಟ್ಟು ತಂದಿದ್ದ ಎರಡು ಕೆಂಪು ಬಣ್ಣದ ಗುಲಾಬಿ ಹೂಗಳನ್ನ ನಿನ್ನ ಕೈಲಿಟ್ಟು
" I LOVE YOU ಕಣೇ BE MY VALANTINE FOR EVER"
ಅಂತ ಅಂದಾಗ ನಿನ್ನ ಕೆನ್ನೆ ಕಣ್ಣಿರಿನ ಜೊತೆ ಮಾತಡಿದ್ದನ್ನ ನಾನು ಗಮನಿಸಿಲ್ಲ ಅಂತಅಂದ್ಕೊಂಡಿದ್ಯಾ ಬಂಗಾರೀ.... ನಿನ್ನೋನು ಕಣೆ ನಾನು.
ನಿನ್ನ ಕಣ್ಣ್ ರೆಪ್ಪೆ ಜೊತೆ ಸಂಭಾಷಣೇ ಮಾಡೋ ಶಕ್ತಿ ನನಗಿದೆ. ಅಂತದ್ರಲ್ಲಿ ನಿನ್ನ ಭಾವನೆಗಳನ್ನ ತಿಳ್ಕೊಳಲ್ವಾ?
ಪ್ರಪಂಚದ ಯಾವ ಪರಿವೆಯೂ ಇಲ್ದೇ ನೀನು ನನ್ನ ಬೀಗಿದಪ್ಪಿಕೊಂಡು ಕಿವಿಯಲ್ಲಿ ಪಿಸುಗುಟ್ಟಿದ್ ಮಾತು ಇನ್ನೂ ಪ್ರತಿಧ್ವನಿಸ್ತಾ ಇದೆ ಕಣೆ.
ಅದೇ ನೆನಪುಗಳೇ ಇವತ್ಗೂ ನಾನು ನಿನ್ನ ಇಷ್ಟು ಇಷ್ಟ ಪಡೊಕೆ ಕಾರಣ ಅನ್ಸತ್ತೆ.
.......ಅಪ್ಪಿ......
ನೀನು ಸುಮ್ನೇ ಕೂತಿರ್ತಿದ್ದೆ ಎರಡೂ ಕಿವಿಗೆ ನಿನ್ನ ipod ನಾ ಇಯರ್‌ಫೋನ್ಸ್ ಗಳು ನಿನ್ನ ಕಿವಿಯಲ್ಲಿ ಹಿತವಾಗಿ ಶಬ್ದ ಮಾಡ್ತಾ ಇರ್ತಿದ್ವೇನೋ,
ನಾನು ಬಂದು ಸುಮ್ನೇ ನಿನ್ ಕಿವಿ ಹಿಂಭಾಗದಲ್ಲಿ ಮೆಲ್ಲನೆ ನನ್ನ್ ಉಸಿರನ್ನ ಬಿಡ್ತಾ ಇದ್ದೇ. ನೆನಪಿದೆಯಾ ಆ ನಿನ್ ಮೈ ಕೈಲಿ ಬರ್ತಾ ಇದ್ದಿದ್ goosebumps!!!
ಕೋಪಕ್ಕೊ, ಪ್ರೀತಿಗೋ, ಭಯಕ್ಕೋ, ನೀನು ಅಟ್ಟಿಸಿಕೊಂಡು ಬರ್ತಾ ಇದ್ದಿದ್ದು ಕಣ್ಣ್ ಮುಂದೆ ಹಸಿರಾಗೇ ಇದೆ... ಮಾಸೋಕೆ ಬಿಡಲ್ಲ ಅದ್ನ.
ನಿನ್ನ ತಿಳಿ ಗುಲಾಬಿ ಬಣ್ಣದ ಸೆಲ್ವಾರ್...ಅದ್ರ ಮೇಲೆ ನನಗಿಷ್ಟ ಅಂತ ಹಾಕೊಳ್ತ ಇದ್ದಿದ್ ಬಿಳಿ ಬಣ್ಣದ ತುಂಬಾನೇ ಮೆದುವಾದ sweter, ನಿನ್ನ ಕಾಲ್ಗಳ ಅಂದ ಹೆಚ್ಚಿಸಿದ್ದ ಗೆಜ್ಜೆಗಳ ಒಂದೊಂದು ಮಣಿಯ ಬಣ್ಣಗಳು ಕೂಡ............ ನೆನಪಿದೆ ಕಣೆ.
ಆ ಹಿತವಾದ ಅಪ್ಪುಗೆ, ಬಿಸಿಯುಸಿರು, ಕಹಿ ಸಿಹಿ ಜಗಳ, ಹುಸಿಗೋಪ, .... ಪ್ರೀತಿಯ ಒಡನಾಟ, ಓಡಾಟ, ಇವೆಲ್ಲವೂ ಸಹ.
ಪುಟ್ಟಾ.... ನಿನ್ನ ತುಂಬನೆ ಪ್ರೀತಿಸ್ತಿನ್ ಕಣೋ.... ಯಾಕೋ ನಿನ್ನಿಂದ ದೂರ ಆಗ್ತಿದಿನೆನೋ ಆನ್ಸ್ತಿದೆ. ನನ್ನ ಬಿಟ್ಟು ಹೋಗ್ ಬೆಡ ಕಣೋ, ನಿನ್ನ ಬಿಟ್ಟು ಬದುಕೋ ಶಕ್ತಿ ನನಗಿಲ್ಲ........... ಅಂತ ತಡರಾತ್ರಿ ನೀ ಕಳುಹಿಸಿದ ಮೆಸೇಜ್ ಇನ್ನೂ ನನ್ನ ಬಳಿ ಸೇಫ್ ಆಗಿದೆ ಕಣೆ. ನೆನಪು ಬಂದಾಗಲೆಲ್ಲ ಅದನ್ನೇ ನೋಡ್ತಾ ಇರ್ತೀನಿ. ಬೇರೆ ಏನೂ ದಿಕ್ಕಿಲ್ಲ ನೋಡು...... ಅದೇ ಮೆಸೇಜ್ ನನ್ನ ಭರವಸೆಯ ಆಸರೆ .
ಹೇಳದೆ, ಕೇಳದೇ, ನೀ ಎಲ್ಗೊದ್ಯೊ ಗೊತ್ತಿಲ್ಲ.
ನಿನ್ನ ಜೊತೆ ಕಳೆದ ಯಾವ ಕ್ಷಣಗಳನ್ನೂ ಮರ್ಯೋಕಾಗ್‍ತಿಲ್ಲ, ಇನ್‌ಫ್ಯಾಕ್ಟ್ ಮರ್ಯೋಕೆ ಬಿಡ್ತೀಲ್ಲ.......
ಆ ಎಲ್ಲ ಮಧುರ ಕ್ಷಣಗಳನ್ನ ಮತ್ತೆ ಪಡೆಯೋ ಬಯಕೆ ಕಣೆ.
ಮತ್ತೆ ಚೂರಾಗೊಗ್ತಿನ್ ಕಣೆ ನಾನು.
ನನ್ನಾ ಉಳಿಸ್ತಿಯ ಅಲ್ವಾ?
ಅಳೊಣ ಅಂದ್ರೆ ಕಣ್ಣಿರೂ ಬರ್ತಿಲ್ಲ ಕಣೆ. ಕಣ್ನೀರು ಸುರಿಸೋ ಬಯಕೆ, ನೀ ಸಿಕ್ಕಾಗ ಬಹುಶಹ ಕಣ್ಣು ಮಂಜಾಗಬಹುದು...... ಆನಂದಕ್ಕಾದ್ರು ಸರಿ.
ಪ್ರತಿದಿನ ಸತ್ತಿದೀನಿ. ಮತ್ತೆ ಬದುಕೋ ಬಯಕೆ.......
ಇವತ್ಗೂ ನಿನ್ ನೆನ್ಪಲ್ಲೆ ಇದೀನಿ. ನನ್ ಬದುಕಲ್ಲಿ ಬೇರೆ ಯಾವ ಜೀವಕ್ಕೂ ಜಾಗ ಇಲ್ಲ.
I promise ..... ನನ್ನ ಉಸಿರಿರೋ ಕೊನೇ ಘಳಿಗೆ ವರೆಗೂ ನಿನಗಾಗೆ ನಾನಿರ್ತೀನಿ.......
..................................... ಅದೇ ಹುಡುಗ,,, ಅದೇ ಪ್ರೀತಿ, ಅದೇ ರೀತಿ.......... ಒಂದು ಹನಿ ಪ್ರೀತಿನ ಸುರಿಸೆ, ಪ್ರೀತಿಯೆಂಬ ಸುಖದ ಮಳೆಯ ಮೋಡಗಳ ಬೆಟ್ಟಗಳನ್ನೆ ಬಚ್ಚಿಟ್ಕೊಂಡಿದೀನಿ ನನ್ ಎದೇಲಿ. ನಿನಗಾಗೆ ಅವೆಲ್ಲ. ಒಟ್ಟಾಗಿ ನೆನೆಯೋಣ......... ಕಾಯ್ತಿರ್ತಿನ್ ಕಣೆ.....
ಬರದೇ ಇರಬೇಡ...............
ಎಂದಿನಂತೆ ಕಾಯ್ತಾ ಇರ್ತೀನಿ..... ಅದೇ ಜಾಗ... ಅದೇ ನಾನು...... ಬರ್ತೀಯಾ ಅಲ್ವಾ?
ಪ್ರೀತಿಯ ಮರು ಬರುವಿಕೆಯ ಭರವಸೆಯ ಕಂಗಳಲ್ಲಿ ಕಾತರದಿಂದ ಕಾದಿರುವ,,,,,,,,
ಎಂದು ಎಂದೆಂದು ನಿನ್ನವ.....
ನಿನ್ನ ಪುಟ್ಟ.
................................ಕಣ್ಣ ಹನಿ ಯೊಂದಿಗೆ ಕೆನ್ನೆ ಮಾತಾಡಿದೆ........