Thursday, July 29, 2010

ಪಯಣವೆಲ್ಲಿಗೋ .... ನಾ ಅರಿಯೆ


ಪಯಣವೆಲ್ಲಿಗೋ ಪಯಣದ ಗುರಿಯ ನಾ ತಿಳಿಯೆ.
ಪಯಣವೆಲ್ಲಿಗೋ
ಪಯಣದ ಪರಿಯ ನಾ ಅರಿಯೆ

ದಟ್ಟ ದರಿದ್ರ ಬದುಕಿನ ಬವಣೆಗಳ ಗಂಟೋಳಗೆ

ನಗುವನ್ನೇ ಮರೆತಿತ್ತು ಮನ ಅಳುತಿತ್ತು
ಕನಸಿನ ಮೂಟೆ ಬೆಟ್ಟದಸ್ಟಿರಲು,
ಮನಸಿನ ಕೋಟೆಗೆ ಬೀಗ ಜಡಿದಿರಲು
ಆಸೆಗಳ ಆರ್ಭಟ ಹೆಚಿತ್ತು ಮನ ಕಲುಕಿತ್ತು .

ಕಳೆದಿಹೆ ದಿನಗಳನು ಎಲ್ಲ ಕಳೆದುಕೊಂಡವನ ಹಾಗೆ

ಸವೆದಿದೆ ಬಡ ಜೀವ ದುಖದೊಡಲೊಳಗೆ
ಮರೆತಿರಲು ಮನ ನಗುವನ್ನೇ
ಉತ್ತರ ಸಿಕ್ಕೀತೇ ಈ ಎಲ್ಲ ಬವಣೆಗಳಿಗೆ

ದಣಿವಾಗಿಹುದು ದೇಹಕೆ

ಮನಸಿಗಲ್ಲವಲ್ಲ ಚಿಂತೆ ಏತಕೆ
ಕಳೆದು ಕೊಳಲು ನೀ ಏನ ತಂದಿರುವೆ
ಎದುರಿಸು ಎಲ್ಲವ ಚಿಂತೆ ಬೇಕಿಲ್ಲ ಮನಕೆ

ಪಯಣವೆಲ್ಲಿಗೋ ಪಯಣದ ಗುರಿಯ ನಾ ತಿಳಿಯೆ.

ಪಯಣವೆಲ್ಲಿಗೋ
ಪಯಣದ ಪರಿಯ ನಾ ಅರಿಯೆ..........

No comments:

Post a Comment