ನೀ ಇರದ ದಾರಿಯಲ್ಲೇ ನಿನ್ನ ನೆರಳ ಹುಡುಕಾಟ ನಡೆದಿದೆ
ಬಾಳ ಬೆಳದಿಂಗಳಿರುಳಲಿ ಚಂದ್ರಮನ ಜೊತೆ ಕಾದಾಟ ಕೂಡ,
ಈ ಕಪಟ ನಗುವಿನ ಹಿಂದಿರುವ ಸತ್ಯಾ ಸತ್ಯತೆ
ಅದೆಸ್ಟು ದಿನ ಮುಚ್ಚಿ ಇಡಲೇ ನನ್ನಿಂದ ನಾನು
ಸತ್ಯ....
ಇಂದು ನಾನು ನೀನು ಒಂದೇ ಅಲ್ಲ
ಇಬ್ಬರ ದೇಹದ ಹಾಗೆ ಮನಸೂ ಕೂಡ.
ಮನ ಬಯಸಿಯೂ ಕೂಡ ನಿನ್ನ ಕೂಡಬೇಕೆಂಬ ಬಯಕೆ ಇಲ್ಲ
ನೆರಳ ಹುಡುಕಾಟ ಅದೆಂದು ಕೊನೆಗಾಣುವದೋ
ಅದೆಂದೂ ನನ್ನ ಮನಕೆ ಸತ್ಯ ತಿಳಿವುದೋ
ಅಂದೇ ಎನಗೆ ಮುಕ್ತಿ.
ನೆರಳೇ ಸಿಗದಿರು ನನಗೆಂದೆಂದು
ಸಹಿಸದು ನಿಜ ನನ್ನಿ ಮನ
ಇರಲಿ ಬಿಡು ಸುಳ್ಳಿನ ನೆನಪಲ್ಲೆ
ಇರಲಿ ಬಿಡು ಕಪಟದ ನಗುವಲ್ಲೆ.
ಇರಲಿ ಬಿಡು.........
,,,,,,,,,,,,,,,,,,,,,,,,,,,,,,,,,,, ನಿಖಿಲ್ !!!
No comments:
Post a Comment