Sunday, December 9, 2012


ಇದ್ದಕ್ಕಿದ್ದಂತೆ ನಿನ್ನ ನೋಡೋ ನೆನಪಾಗ್ಬಿಡತ್ತೆ ಕಣೆ,
 ಬಿಕ್ಕಿ ಬಿಕ್ಕಿ ಅಳುತ್ತೆ
ಮನಸು ಚಿಕ್ಕ ಮಗು ಅಮ್ಮ ಬೇಕು ಅಂತ ಅಳೋ ಹಾಗೆ.. 
ಎಸ್ಟೇ ಸಮಾಧಾನ ಮಾಡ್ಲಿನಾನು?
 ನನ್ನ ಎದೆಮೇಲೆ ಕೈ ಇಟ್ಟು ಜೋರಾಗಿ ಹೋಡ್‌ಕೊಳ್ತಿರೋ heart ನಾ ಸುಮ್ನೀರ್ಸೋಕೆ ನಾನು ಪಾಡೋ ಪಾಡು ಆಸ್ಟಿಸ್ಟಲ್ಲ. 
ಪಾಪ ಕಾಣೆ ನಾನು. 
ಕಣ್ಣ ಹನಿಗಳು ಕೆನ್ನೇನೂ ಸಕತ್ ಫ್ರೆಂಡ್ಸ್  ಆಗ್ಬಿಟ್ಟಿವೆ.
 ಒಂಥರಾ ನಂಟು ಅವುಗಳದ್ದು. ಬಿರು ಬಿಸಿಲಲ್ಲಿ ನೆನಪಾಗ್ತೀಯ ನಿಂಗೆ
ಬಿಸಿಲು ತಾಗದಿರಲಿ ಅಂತ ನನ್ನ ಕೈಗಳನ್ನ ನಿಂಗಾಸರೆ ಮಾಡಿದ್ದು ಇನ್ನೂ ಹಸಿಯಾಗಿದೆ ಕಣೆ.

ಹೇ.... ನೆನ್‌ಪಿದ್ಯಾ? ನಾನು ನಡುಗುತ್ತಾ ಇದ್ದೇ ನನ್ನ ಬೆಚ್ಚನೆ sweater ನಾ ನಿಂಗೆ
ಅಂತ ಕೊಟ್ಟು ನೀನು ಬೆಚ್ಚಗಿರೊದ್ನ ನೋಡ್ಕೊಂಡು ಖುಷಿಪಡ್ತಿದ್ದೆ. ಒಂಥರ ನಾನು
ಬೆಚ್ಚಗಾಗಿದ್ದೆ. ಮಳೆ ಅಂದ್ರೆ ನಿಂಗೆ ಇಸ್ಟ ಅಲ್ವಾ? ಮಳೆಲಿ ನೆನ್ನ್ಕೊಂಡು ನಾವು
ಓಡಾಡದಿರೂ ಜಾಗಗಳು ಇದ್ಯಾ? ನಿನ್ನ ಅಪ್ಪುಗೆ ಬಿಸಿ ಸಿಹಿ ಚುಂಬನ ಎಲ್ಲ ಕಣ್ಣಮುಂದೆ ಹಚ್ಚ ಹಸುರಾಗಿದೆ ಕಣೆ. 

"ಭೂವೀ ಕೆನ್ನೆ ತುಂಬಾ ಮುಗಿಲು ಸುರಿದ ಮುತ್ತಿನ ಗುರುತು ನನ್ನ ಎದೆಯ ತುಂಬಾ ನೀನು ಬಂದ ಹೆಜ್ಜೆಯ ಗುರುತು"

ಮತ್ತೆ ಚಳಿಗಾಲ ಕಣೇ... ಇವಾಗ ನಿನ್ನ ಮರ್ಯೋಕೆ ಸಾಧ್ಯಾನ? ನಿನ್ನ ಹಿತವಾದ ಬಿಸಿ ಅಪ್ಪುಗೇನ
ಮರೆಯೋದು ಅಸಾಧ್ಯ ಕಣೆ. ಅಸಲಿಗೆ ನಿಂಗೆ ಅರ್ಥ ಆಗ್ದೆಇರೊದು ಏನೇ ಇದೆ?... ನನ್ನ್ ಕಿಂತ
ನನ್ನ್ ಬಗ್ಗೆ ಹೆಚ್ಚಾಗಿ ಗೊತ್ತಿರೋದು ನಿನ್ಗೇ ಅಲ್ವೇನೇ? ನನ್ನ ಮನದ ಬಾಗಿಲನ್ನ
ತೆರೆದಿಟ್ಟು ಕೊರೆಯೊ ಚಳಿಯಲ್ಲಿ ಕಾಯ್ತ್ತಿದಿನ್ ಕಣೆ......... ನಿನ್ಗೂಸ್ಕರ ಬಿಸಿ
ಬಿಸಿ ಅಡುಗೆ ಕೂಡ reddy ಇದೆ. ನನ್ನ ಹಿತವಾದ ಪ್ರೀತಿ ಮಜವಾದ ಮಾತು ಬಿಸಿ ಬಿಸಿ
ಅಪ್ಪುಗೆಯ ಜೊತೆ ಸಿಹಿ ಚುಂಬನ ಕೂಡ......... 

ಬರ್ತೀಯಾ ಅಲ್ವಾ?


No comments:

Post a Comment