
ಬಾಳ ಹಣತೆಯ
ಉರಿವ ಹುರುಪು
ಕುಗ್ಗಿದಂತಿದೆ.
ಶಕ್ತಿಯಾಗಿ ಬಾ ಗೆಳತಿ
ಉರಿವೆ ಮತ್ತೆ ಮೊದಲಿನಂತೆ .....
ಇರುಳ ತುಳಿದು ಬರುವ ರವಿತೇಜನಂತೆ......
ಹುರುಪಾಗಿ ಬಾ ಮನಕೆ......
ಉರಿವೆ ಮತ್ತೆ ಮೊದಲಿನಂತೆ....
ಕೊನೆ ಕಾಣದ ಕಡಲ ಅಲೆಯಂತೆ...
ಮಿಂಚಾಗಿ ಬಾ ಗೆಳತಿ....
ಬೆಳೆವೆ ಮತ್ತೆ ಮೊದಲಿನಂತೆ
ಹಸಿರ ಹೊನ್ನಾಗುವ ಎಳೆ ಚಿಗುರಿನಂತೆ....
.............ನಿಖಿಲ್......ಹುರುಪಿನ ನಿರೀಕ್ಷೆಯ ಹುಡುಕಾಟದಲ್ಲಿ
No comments:
Post a Comment